ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲಕರ್ಮಿಗಳು, ಉದ್ಯಮಿಗಳು ಸ್ವ-ಉದ್ಯೋಗ ನಡೆಸಲು ಕೌಶಲ್ಯ ತರಬೇತಿ ಮತ್ತು ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಶ್ರಮ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರೂ. 50,000 ದ ವರೆಗೆ ಸಾಲವನ್ನು ನೀಡಲಾಗುವುದು. ಅದರಲ್ಲಿ 50% ಸಬ್ಸಿಡಿ ರೂಪದಲ್ಲಿ ನೀಡಲಾಗುವುದು ಮತ್ತು 50% ಹಣವನ್ನು ಮರುಪಾವತಿಸಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಕಂಡ ಹಂತದಲ್ಲಿ ವಿವರಿಸಲಾಗಿದೆ.
Shrama Shakti Scheme In Kannada
ಶ್ರಮ ಶಕ್ತಿ ಯೋಜನೆಯನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಾರಿಗೆ ತಂದಿದ್ದು, ಅಲ್ಪಸಂಖ್ಯಾತರ ಸಮುದಾಯದ ನಿರುದ್ಯೋಗಿಗಳು ಸ್ವಂತವಾಗಿ ಉದ್ಯಮವನ್ನು ಪ್ರಾರಂಭಿಸಲು ಮತ್ತು ಕೌಶಲ್ಯಾಭಿವೃದ್ಧಿಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ.
ಶ್ರಮ ಶಕ್ತಿ ಯೋಜನೆ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತಾ ಮಾನದಂಡ, ಪ್ರಮುಖ ದಾಖಲೆಗಳು ಹಾಗೂ ಇನ್ನಷ್ಟುಮಾಹಿತಿಯನ್ನು ಕೆಳಗೆ ನೀಡಿರುತ್ತೇವೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಅವಲೋಕನ: (Shrama Shakti Scheme In Kannada)
| ಯೋಜನೆಯ ಹೆಸರು | ಶ್ರಮ ಶಕ್ತಿ ಯೋಜನೆ |
| ಅನುಷ್ಠಾನ | ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ |
| ಫಲಾನುಭವಿಗಳು | ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರು |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅಧಿಕೃತ ವೆಬ್ ಸೈಟ್ | https://kmdconline.karnataka.gov.in/ |
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಸರ್ಕಾರವು ಶ್ರಮ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗುವುದು ಇದರಿಂದಾಗಿ ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಂಡು ತಮ್ಮದೇ ಒಂದು ಸಣ್ಣ ಉದ್ಯಮವನ್ನು ನಡೆಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 4% ಬಡ್ಡಿ ದರದಲ್ಲಿ ರೂ. 50,000 ವರೆಗೆ ಸಾಲವನ್ನು ನೀಡಲಾಗುತ್ತಿದು ಅದರಲ್ಲಿ 50% ಹಣವನ್ನು 36 ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ.
ಯೋಜನೆಯ ಉದ್ದೇಶ:
- ಬಡತನ ರೇಖೆಗಿಂತ ಕೆಳಗಿರುವ ಅಲ್ಪಸಂಖ್ಯಾತರ ಸಮುದಾಯಗಳ ಕುಟುಂಬಗಳ ಆರ್ಥಿಕ ಮಟ್ಟವನ್ನು ಬಲಪಡಿಸಿ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಪ್ರೇರೇಪಿಸುವುದು.
- ಉದ್ಯೋಗ ಮಾಡುತ್ತಿದ್ದರೂ ಹಣಕಾಸಿನ ಸಮಸ್ಯೆ ಇದ್ದವರಿಗೆ ಪ್ರತ್ಯೇಕವಾಗಿ ಉದ್ಯೋಗ ನಡೆಸಲು ಈ ಯೋಜನೆಯು ಒಟ್ಟು ಸಾಲದ ಮೇಲೆ 50% ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡುವುದು.
- ಅಲ್ಪಸಂಖ್ಯಾತರ ವರ್ಗದ ಕಸಬುದಾರದ ಕಲಾತ್ಮಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವುದು.
- ನಿರುದ್ಯೋಗಿ ಯುವಕರಿಗೆ ಕಡಿಮೆ ಬಡ್ಡಿ ರೂಪದಲ್ಲಿ ಸಾಲವನ್ನು ನೀಡಿ ಸ್ವಂತ ಉದ್ಯಮವನ್ನು ನಡೆಸಲು ಪ್ರೋತ್ಸಾಹ ನೀಡುವುದು.
ಯೋಜನೆಯ ಪ್ರಯೋಜನಗಳು: Shrama Shakti Scheme In Kannada
- ಅಲ್ಪಸಂಖ್ಯಾತರ ಸಮುದಾಯಗಳ ಕುಶಲಕರ್ಮಿಗಳಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ರೂ. 50,000 ವರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು.
- ಒಟ್ಟು ರೂ. 50,000 ದಲ್ಲಿ ಅರ್ಧದಷ್ಟು ಹಣವನ್ನು ಕೇವಲ 4% ಬಡ್ಡಿ ದರದಲ್ಲಿ 36 ಕಂತುಗಳಲ್ಲಿ ಮರುಪಾವತಿಸಲಾಗುವುದು.
- ಒಟ್ಟು ರೂ. 50,000 ದಲ್ಲಿ 50% ಹಣವನ್ನು ಸಹಾಯಧನವಾಗಿ ಪಡೆದುಕೊಳ್ಳಬಹುದು, ಅದನ್ನು ಮರುಪಾವತಿಸಬೇಕೆಂದಿಲ್ಲ.
ಅರ್ಹತಾ ಮಾನದಂಡಗಳು: Shrama Shakti Scheme In Kannada
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಅವರ ಕುಟುಂಬದವರು ಕಳೆದ 5 ವರ್ಷದಲ್ಲಿ ಯಾವುದೇ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು/ ಪ್ರಯೋಜನವನ್ನು ಪಡೆದಿರಬಾರದು.
- ಅರ್ಜಿದಾರರು 18 ರಿಂದ 55 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ ರಾಜ್ಯ ಸರ್ಕಾರಿ ಹುದ್ದೆಯಲ್ಲಿರಬಾರದು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಸ್ವಯಂ ಘೋಷಣಾ ಪತ್ರ
- ಯಾವ ಉದ್ದಿಮೆ ಮಾಡಲಾಗುವುದರ ಕುರುತು ಯೋಜನಾ ವರದಿ
- ಬ್ಯಾಂಕ್ ಪಾಸ್ ಬುಕ್
- ಜಾಮೀನುದಾರರ ಸ್ವಯಂ ಘೋಷಣಾ ಪತ್ರ
ಅರ್ಜಿ ಸಲ್ಲಿಸುವ ವಿಧಾನ: Shrama Shakti Scheme In Kannada
- ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ ಸೈಟ್ https://kmdconline.karnataka.gov.in/ ಗೆ ಭೇಟಿನೀಡಿ ಅರ್ಜಿಸಲ್ಲಿಸಿ
- ಅರ್ಜಿ ನಮೂನೆ ಆಯ್ಕೆಯನ್ನು ಕ್ಲಿಕ್ ಮಾಡಿ
- ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
- ಅರ್ಜಿ ನಮೂನೆಯ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಜಿಲ್ಲೆಯ ಆಯ್ಕೆ ಸಮೀತಿಗೆ ಸಲ್ಲಿಸಿ
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:-
ಶ್ರಮ ಶಕ್ತಿ ಯೋಜನೆಯನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಾರಿಗೊಳಿಸಿದ್ದು, ಅಲ್ಪಸಂಖ್ಯಾತರ ನಿರುದ್ಯೋಗಿ ಯುವಕರಿಗೆ ಸ್ವ- ಉದ್ಯೋಗವನ್ನು ನಡೆಸಲು ಪ್ರೇರೇಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಆ ಫನಾನುಭವಿಯು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಯೋಜನೆಯ ಲಾಭವನ್ನು ಪಡೆದುಕೊಂಡ ವ್ಯಕ್ತಿ ಒಟ್ಟು ರೂ. 50,000 ದಲ್ಲಿ ಅರ್ಧದಷ್ಟು ಹಣವನ್ನು 4% ಬಡ್ಡಿ ದರದಲ್ಲಿ 36 ಕಂತುಗಳ ಒಳಗೆ ಮರುಪಾವತಿಸದಿದ್ದಲ್ಲಿ ಸಬ್ಸಿಡಿ ರೂಪದಲ್ಲಿ ನೀಡಿದ ಹಣವನ್ನು ಸಾಲವೆಂದೇ ಪರಿಗಣಿಸಲಾಗುವುದು.
ಇತರೆ ಪ್ರಮುಖ ಲಿಂಕುಗಳು:
- ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ 2026
- ರಾಜೀವ್ ಗಾಂಧಿ ವಸತಿ ಯೋಜನೆ 2026
- ಕಟ್ಟಡ ಕಾರ್ಮಿಕರ ಗೃಹ ಭಾಗ್ಯ ಯೋಜನೆ 2026
- ವಿದ್ಯಾಸಿರಿ ವಿದ್ಯಾರ್ಥಿವೇತನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026

