ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳಿಗೆ ಸೇರಿದ ಮತ್ತು ಮೆಟ್ರಿಕ್ ನಂತರ ಕೋರ್ಸ್ ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಮಾಡುವ ಉದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿದೆ.
Vidyasiri Scholarship 2026 In Kannada
ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 31 ಜನವರಿ 2026 ವರೆಗೆ ವಿಸ್ತರಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.
ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗಿನ ಹಂತಗಳಲ್ಲಿ ನೀಡಿರುವ ಯೋಜನೆಯ ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು, ಅರ್ಹತಾ ಮಾನದಂಡ ಹಾಗೂ ಇನ್ನಷ್ಟು ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಅರ್ಜಿಯನ್ನು ಸಲ್ಲಿಸಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ವಿದ್ಯಾರ್ಥಿವೇತನದ ಅವಲೋಕ: Vidyasiri Scholarship 2026 In Kannada
| ವಿದ್ಯಾರ್ಥಿ ವೇತನದ ಹೆಸರು | ವಿದ್ಯಾಸಿರಿ ವಿದ್ಯಾರ್ಥಿವೇತನ |
| ಅರ್ಹ ಫಲಾನುಭವಿಗಳು | ಹಿಂದುಳಿದ ವರ್ಗದ ವಿದ್ಯಾರ್ಥಿಗಳು |
| ವಿದ್ಯಾರ್ಥಿ ವೇತನದ ಮೊತ್ತ | ವಾರ್ಷಿಕ 15,000 |
| ಇಲಾಖೆ | ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ |
| ಶೈಕ್ಷಣಿಕ ವರ್ಷ | 2025-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-01-2026 |
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಾಡಿಯಲ್ಲಿ ಬಿಡುಗಡೆ ಮಾಡಲಾದ ವಿದ್ಯಾಸಿರಿ ವಿದ್ಯಾರ್ಥಿವೇತನವು ಹಿಂದುಳಿದ ವರ್ಗಕ್ಕೆ ಸೇರಿದ ಮತ್ತು ಮೆಟ್ರಿಕ್ ನಂತರದ ಕೋರ್ಸ್ ಗಳನ್ನು ಅಧ್ಯಯನ ಮಾಡುವಾಗ ಯಾವುದೇ ಇಲಾಖೆ ಅಥವಾ ಸರ್ಕಾರಿ ಅನುದಾನಿತ ವಸತಿ ಕಾಲೇಜು ಅಥವಾ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಯಾವುದೇ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಲ್ಲಿ ವಂಚಿತರಾಗಬಾರದೆಂಬುವುದೇ ವಿದ್ಯಾಸಿರಿ ಯೋಜನೆಯ ಪ್ರಮುಖ ಉದ್ದೇಶ.
ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿ ವೇತನದ ಮೂಲಕ ತಿಂಗಳಿಗೆ 1,500 ರಂತೆ ಹತ್ತು ತಿಂಗಳಿಗೆ 15,000 ವರೆಗೆ ಸಹಾಯಧನವನ್ನು ನೀಡುತ್ತದೆ.
ವಿದ್ಯಾರ್ಥಿವೇತನವನ್ನು ನೀಡುವ ಉದ್ದೇಶ:
ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿರುವ ಮುಖ್ಯ ಉದ್ದೇಶ ಈ ಕೆಳಕಂಡಂತಿವೆ
- ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು.
ಎಲ್ಲಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಶಿಕ್ಷಣವನ್ನು ಪಡೆದು ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಬೇಕೆಂಬ ಕನಸ್ಸಿರುತ್ತದೆ. ಈ ಎಲ್ಲಾ ಕನಸ್ಸುಗಳು ಕನಸ್ಸಾಗಿಯೇ ಉಳಿಯಲು ಕಾರಣ ಹಣಕಾಸಿನ ಕೊರತೆಯಾಗಿರುತ್ತದೆ. ಈ ಒಂದು ವಿದ್ಯಾಸಿರಿ ವಿದ್ಯಾರ್ಥಿವೇತನದಿಂದ ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಸುಧಾರಿಸಬಹುದು.
- ಪೋಸ್ಟ್ ಮ್ಯಾಟ್ರಿಕ್ ಶಿಕ್ಷಣವನ್ನು ಮುಂದುವರೆಸಲು ಉತ್ತೇಜನ ನೀಡುವುದು.
ಕೆಲವು ಕಡೆಗಳಲ್ಲಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲಿಯೇ ಮುಗಿಸಿ ಪೋಷಕರೊಂದಿಗೆ ಕೂಲಿ ಕೆಲಸಕ್ಕೆ ಹೋಗುವುದನ್ನು ತಡೆಗಟ್ಟಬಹುದು.
- ಸಮಾಜದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಕಲ್ಪಿಸುವುದು.
ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿವೇತನದ ಮೂಲಕ ಶಿಕ್ಷಣ ಪಡೆಯುದರಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಸಮಾನ ಹಕ್ಕನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
- ವಸತಿ ಮತ್ತು ಆಹಾರ ವೆಚ್ಚದ ಭಾರವನ್ನು ಕಡಿಮೆ ಮಾಡುವುದು.
ವಿದ್ಯಾರ್ಥಿಗಳು ಸಂಪೂರ್ಣವಾಗಿ ಓದಿನ ಮೇಲೆ ಗಮನ ಹರಿಸಲು ಮತ್ತು ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗೆ ಮತ್ತು ದಿನನಿತ್ಯದ ಆಹಾರದ ಖರ್ಚನ್ನು ನಿಭಾಯಿಸಲು ವಿದ್ಯಾಸಿರಿ ವಿದ್ಯಾರ್ಥಿವೇತನದ ಮೂಲಕ ಸಹಾಯಧನವನ್ನು ನೀಡುವುದು.
ವಿದ್ಯಾರ್ಥಿವೇತನದಿಂದ ಆಗುವ ಪ್ರಯೋಜನ:
ವಿದ್ಯಾರ್ಥಿಗಳಿಗಾಗುವ ಪ್ರಯೋಜನ:
- ವಿದ್ಯಾರ್ಥಿಗಳು ಹಣಕಾಸಿನ ಕೊರತೆಯಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ಮುಗಿಸುದನ್ನು ತಡೆಯಬಹುದು.
- ವಿದ್ಯಾರ್ಥಿಗಳಿಗೆ ದಿನನಿತ್ಯದ ಆಹಾರದ ಖರ್ಚು ಮತ್ತು ವಸತಿ ವ್ಯವಸ್ಥೆಗೆ ಸಹಾಯ ಒದಗಿಸುವುದು.
- ಆರ್ಥಿಕ ಚಿಂತೆ ಕಡಿಮೆಯಾಗಿ ಓದಿನ ಮೇಲೆ ಹೆಚ್ಚಿನ ಗಮನ ಹರಿಸಬಹುದು.
- ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಹೆಚ್ಚುತ್ತದೆ.
ಸರ್ಕಾರಕ್ಕಾಗುವ ಪ್ರಯೋಜನ:
- ರಾಜ್ಯದಲ್ಲಿ ಉತ್ತಮ ಶಿಕ್ಷಣ ಪಡೆಯುವವರ ಸಂಖ್ಯೆ ಹುಚ್ಚುತ್ತದೆ.
- ಹಿಂದುಳಿದ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಸಿಗುವುದು.
- ಉತ್ತಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗವನ್ನು ಪಡೆದುಕೊಂಡು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕರಿಸುತ್ತಾರೆ.
ಅರ್ಹತಾ ಮಾನದಂಡ: Vidyasiri Scholarship 2026 In Kannada
ಶೈಕ್ಷಣಿಕ ಅರ್ಹತೆ:
- ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ಕಲಿಯುತ್ತಿರಬೇಕು.
- ಕನಿಷ್ಠ 75% ತರಗತಿ ಹಾಜರಾತಿ ಕಡ್ಡಾಯವಾಗಿರುತ್ತದೆ.
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವರ್ಗ 1 ರ ವಿದ್ಯಾರ್ಥಿಗಳು ಕನಿಷ್ಠ 55% ಅಂಕವನ್ನು ಹಾಗೂ ಪ್ರವರ್ಗ 2A, 3A, 3B ವರ್ಗದ ವಿದ್ಯಾರ್ಥಿಗಳು ಕನಿಷ್ಠ 65% ಅಂಕವನ್ನು ಗಳಿಸಿರಬೇಕು.
- ವಿದ್ಯಾರ್ಥಿಗಳು ಯಾವುದೇ ಇಲಾಖೆ ಅಥವಾ ಸರ್ಕಾರಿ ಅನುದಾನಿತ ವಸತಿ ಕಾಲೇಜು ಅಥವಾ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆದಿರಬಾರದು.
- ಒಂದಕ್ಕಿಂತ ಹೆಚ್ಚು ಕೋರ್ಸ್ ಗಳನ್ನು ಬದಲಿಸುವ ವಿದ್ಯಾರ್ಥಿ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಸಾಮಾನ್ಯ ಅರ್ಹತೆಗಳು:
- ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ವಿದ್ಯಾರ್ಥಿಯು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
- ಒಂದೇ ಕುಟುಂಬದ ಇಬ್ಬರು ಗಂಡುಮಕ್ಕಳು ಮಾತ್ರ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. (ಹೆಣ್ಣು ಮಕ್ಕಳಿಗೆ ಇದು ಅನ್ವಹಿಸುವುದಿಲ್ಲ)
- ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ SSP ವಿದ್ಯಾರ್ಥಿವೇತನಕ್ಕೆ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸಿರಬೇಕು.
- ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಅವರ ವಾಸಸ್ಥಳವು ಅವರು ಶಿಕ್ಷಣ ಪಡೆಯುತ್ತಿರುವ ಕಾಲೇಜಿನಿಂದ ಕನಿಷ್ಠ 5 ಕಿ.ಮೀ ದೂರದಲ್ಲಿರಬೇಕು.
- ಪ್ರವರ್ಗ 1 ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ಮೀರಿರಬಾರದು.
- ಪ್ರವರ್ಗ 2A, 3A, 3B ವರ್ಗದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 1ಲಕ್ಷ ಮೀರಿರಬಾರದು.
ಅಗತ್ಯ ದಾಖಲೆಗಳು: Vidyasiri Scholarship 2026 In Kannada
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಪುಸ್ತಕ
- ವಿದ್ಯಾರ್ಥಿಗಳ SSLC ನೋಂದಣಿ ಸಂಖ್ಯೆ
- PUC ವಿದ್ಯಾರ್ಥಿಗಳಾಗಿದ್ದರೆ SATS ID ಮತ್ತು PUC ಅಲ್ಲದ ವಿದ್ಯಾರ್ಥಿಗಳಿಗೆ Reg No. ಅಥವಾ USN
- ಕಾಲೇಜು ಪ್ರವೇಶ ಶುಲ್ಕದ ರಶೀದಿ
- ಮೊಬೈಲ್ ನಂಬರ್
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ: Vidyasiri Scholarship 2026 In Kannada
- ಅಧಿಕೃತ ವೆಬ್ ಸೈಟ್ https://ssp.postmatric.karnataka.gov.in/ ಗೆ ಭೇಟಿ ನೀಡಿ
- ಕ್ರಿಯೇಟ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ
- ಆಧಾರ್ ಸಂಖ್ಯೆಯನ್ನು ಮತ್ತು ಹೆಸರನ್ನು ನಮೂದಿಸಿ
- ನಿಮ್ಮ ಮೊಬೈಲ್ ಗೆ ಬರುವ OTP ಯನ್ನು ನಮೂದಿಸಿ
- ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಪ್ರತಿಯ ಪ್ರಿಂಟ್ ತೆಗೆದುಕೊಳ್ಳಿ
- ನಂತರ ಅರ್ಜಿ ಪ್ರತಿಯೊಂದಿಗೆ ಪೂರಕ ದಾಖಲೆಗಳನ್ನು ನಿಮ್ಮ ಕಾಲೇಜು ಗೆ ಸಲ್ಲಿಸಿ.
ಪ್ರಮುಖ ದಿನಾಂಕ: Vidyasiri Scholarship 2026 In Kannada
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-01-2026 |
ಪ್ರಮುಖ ಲಿಂಕ್: Vidyasiri Scholarship 2026 In Kannada
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿದ್ದು, ಒಂದು ಶೈಕ್ಷಣಿಕ ವರ್ಷಕ್ಕೆ 15,000 ವರೆಗೆ ಸಹಾಯಧನವನ್ನು ನೀಡುತ್ತದೆ. ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ಅವರ ವಾಸಸ್ಥಳವು ಅವರು ಶಿಕ್ಷಣ ಪಡೆಯುತ್ತಿರುವ ಕಾಲೇಜಿನಿಂದ ಕನಿಷ್ಠ 5 ಕಿ.ಮೀ ದೂರದಲ್ಲಿರಬೇಕು.
ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಇತರೆ ಪ್ರಮುಖ ಲಿಂಕುಗಳು:
| ಪ್ರಮುಖ ಯೋಜನೆಗಳು | ಪ್ರಮುಖ ಲಿಂಕುಗಳು |
| ರಾಜೀವ್ ಗಾಂಧಿ ವಸತಿ ಯೋಜನೆ 2026 | ಇಲ್ಲಿ ಕ್ಲಿಕ್ ಮಾಡಿ |
| ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ | ಇಲ್ಲಿ ಕ್ಲಿಕ್ ಮಾಡಿ |
| ಐರಾವತ ಯೋಜನೆ ಅರ್ಜಿ 2026 | ಇಲ್ಲಿ ಕ್ಲಿಕ್ ಮಾಡಿ |
| ವಿಧವಾ ಪಿಂಚಣಿ ಯೋಜನೆ ಅರ್ಜಿ 2026 | ಇಲ್ಲಿ ಕ್ಲಿಕ್ ಮಾಡಿ |
| ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ 2026 | ಇಲ್ಲಿ ಕ್ಲಿಕ್ ಮಾಡಿ |

