ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ 2026 | PMEGP Scheme In Karnataka In Kannada 2026

ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ 2026 | PMEGP Scheme In Karnataka In Kannada 2026

ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕ ಯುವತಿಯರಿಗೆ ಭರ್ಜರಿ ಗುಡ್ ನ್ಯೂಸ್. ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿಯಲ್ಲಿಸ್ವಯಂ ಉದ್ಯೋಗ ನಡೆಸಲು ಯುವಕ ಯುವತಿಯರಿಗೆ ಒಟ್ಟು ಸಾಲದ ಮೇಲೆ 35% ಸಹಾಯಧನವನ್ನು ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

PMEGP Scheme In Karnataka In Kannada

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿನೀಡಿ. ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು,ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:(PMEGP Scheme In Karnataka In Kannada 2026)

ಯೋಜನೆಯ ಹೆಸರು ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ
ಅರ್ಹ ಫಲಾನುಭವಿಗಳು ಯುವಕ-ಯುವತಿಯರು
ಒಟ್ಟು ಪ್ರೋತ್ಸಾಹಧನ ಒಟ್ಟು ಸಾಲದ ಮೇಲೆ 35%
ಅಧಿಕೃತ ವೆಬ್ ಸೈಟ್ https://www.kviconline.gov.in/
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
PMEGP Scheme In Karnataka In Kannada 2026

ಸಂಕ್ಷಿಪ್ತ ಮಾಹಿತಿ:

ಭಾರತ ಸರ್ಕಾರವು ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯು 2008 ರಲ್ಲಿ ಪ್ರಾರಂಭವಾಗಿದೆ. ಗ್ರಾಮೀಣ ಹಾಗೂ ನಗರ ಭಾಗದ ಯುವಕ-ಯುವತಿಯರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಹಾಗೂ ಕೃಷಿಯೇತರ ಉದ್ಯಮವನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆಯು ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆ ಮತ್ತು ಪ್ರಧಾನಮಂತ್ರಿ ರೋಸ್ಗಾರ್ ಯೋಜನೆಗಳು ಜಂಟಿಯಾಗಿ ಹುಟ್ಟಿಕೊಂಡ ಯೋಜನೆಯಾಗಿದೆ.

ಯೋಜನೆಯ ಉದ್ದೇಶ: PMEGP Scheme In Karnataka In Kannada 2026

  • ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದು.
  • ನಗರ ಮತ್ತು ಗ್ರಾಮೀಣ ಭಾಗದ ಜನರ ಉದ್ಯಮಶೀಲತೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹ ನೀಡುವುದು.
  • ನಿರುದ್ಯೋಗಿಗಳಿಗೆ ಸ್ಥಿರ ಉದ್ಯೋಗ ಕಲ್ಪಿಸುವುದು.
  • ಕೃಷಿಯೇತರ ವಲಯಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು.

ಯೋಜನೆಯ ಪ್ರಯೋಜನ:

  • ಫಲಾನುಭವಿಗಳು ಹೊಸ ಉದ್ಯಮ ಆರಂಭಿಸಲು ಸಬ್ಸಿಡಿ ಸಹಿತ ಸಾಲ ಸೌಲಭ್ಯವನ್ನು ನೀಡುವುದು.
  • ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡು ಸ್ಥಿರ ಉದ್ಯೋಗ ಸೃಷ್ಟಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಬಹುದು.
  • ಉದ್ಯೋಗವನ್ನು ಹುಡಿಕಿಕೊಳ್ಳಲು ನಗರ ಅಥವಾ ಗ್ರಾಮೀಣ ಪ್ರದೇಶದ ಕಡೆಗೆ ವಲಸೆ ಹೋಗುವುದನ್ನು ಕಡಿಮೆಮಾಡುವುದು.

ಯಾವ ಉದ್ಯಮಗಳಿಗೆ ಸಾಲಸೌಲಭ್ಯ ದೊರೆಯುತ್ತದೆ?

  • ಪರಿಸರ ಸ್ನೇಹಿ ಉದ್ಯಮಗಳು:

ಇಟ್ಟಿಗೆ ತಯಾರಿಕಾ ಘಟಕಗಳು, ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಘಟಕಗಳು

  • ಆಹಾರ ಮತ್ತು ಕೃಷಿ ಆಧಾರಿತ ಉದ್ಯಮಗಳು:

ಹಾಲು ಉತ್ಪನ್ನ, ಬೇಕರಿ ಮತ್ತು ಮಸಾಲ ತಯಾರಿಕೆ

  • ಜವಳಿ ಮತ್ತು ಉಡುಪು:

ಪ್ರಿಂಟಿಂಗ್ ಘಟಕಗಳು, ರೆಡಿಮೇಡ್ ಉಡುಪುಗಳು

  • ಸೇವಾ ವಲಯ:

ಪ್ರಿಂಟಿಂಗ್ ಪ್ರೆಸ್, ಕಂಪ್ಯೂಟರ್ ಸೇವೆ, ಬ್ಯೂಟಿ ಪಾರ್ಲರ್, ಟೈಲರಿಂಗ್

  • ಅರಣ್ಯ ಮತ್ತು ಕರಕುಶಲ:

ಜೇನು ಸಾಕಾಣಿಕೆ, ಪೊರಕೆ ತಯಾರಿಕೆ.

ಅರ್ಹತಾ ಮಾನದಂಡ: PMEGP Scheme In Karnataka In Kannada 2026

  • ಅರ್ಜಿದಾರರು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • 5 ಲಕ್ಷಕ್ಕಿಂತ ಹೆಚ್ಚಿನ ಸೇವಾ ಯೋಜನೆಗಳಿಗೆ ಮತ್ತು 10 ಲಕ್ಷಕ್ಕಿಂತ ಹೆಚ್ಚಿನ ಉತ್ಪಾದನಾ ಯೋಜನೆಗೆ ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಈ ಯೋಜನೆಯು ಹೊಸ ಉದ್ಯಮಗಳಿಗಷ್ಟೇ ಅನ್ವಹಿಸುತ್ತದೆ.
  • ಈ ಯೋಜನೆಯ ಲಾಭ ಪಡೆದುಕೊಳ್ಳಬೇಕಾದರೆ ಯಾವುದೇ ಆದಾಯದ ಮಿತಿ ಇರುವುದಿಲ್ಲ.
  • ಉದ್ಯಮ ಪ್ರಾರಂಭಿಸುವ ಮೊದಲು 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಡ್ಡಾಯವಾಗಿರುತ್ತದೆ
  • ತರಬೇತಿ ಪೂರ್ಣಗೊಂಡ ನಂತರ ಮಾತ್ರ ಸಹಾಯಧನ ಬಿಡುಗಡೆಯಾಗುತ್ತದೆ.

ಸಾಲದ ಮಿತಿ:

  • ಸೇವಾ ವಲಯ: 20 ಲಕ್ಷ
  • ಉತ್ಪಾದನಾ ವಲಯ: 50 ಲಕ್ಷ
  • ಯಶಸ್ವಿಯಾಗಿ ಉದ್ಯಮವನ್ನು ನಡೆಸಿದ ಉದ್ಯಮಿಗಳಿಗೆ ಎರಡನೇ ಬಾರಿಗೆ ಸಲ ಸೌಲಭ್ಯವನ್ನು ನೀಡಲಾಗುವುದು.

ಸಬ್ಸಿಡಿ ದರ:

  • ಸಾಮಾನ್ಯ ವರ್ಗದ ನಗರ ಪ್ರದೇಶದ ಫಲಾನುಭವಿಗಳಿಗೆ ಒಟ್ಟು ಸಾಲದ ಮೇಲೆ 15% ಮತ್ತು ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 25%
  • ನಗರ ಪ್ರದೇಶದ SC/ST/OBC/ಮಹಿಳೆಯರು/ಮಾಜಿ ಸೈನಿಕರಿಗೆ ಒಟ್ಟು ಸಾಲದ ಮೇಲೆ 25% ಮತ್ತು ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 35%

ಅಗತ್ಯ ದಾಖಲೆಗಳು: PMEGP Scheme In Karnataka In Kannada 2026

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಶೈಕ್ಷಣಿಕ ಪ್ರಮಾಣಪತ್ರ
  • EDP ತರಬೇತಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆಯ ವಿವರ
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಉದ್ಯಮ ಸ್ಥಳದ ದಾಖಲು
  • ವಯಸ್ಸಿನ ಪ್ರಮಾಣಪತ್ರ
  • ಇತರೆ ದಾಖಲೆಗಳು.

ಅರ್ಜಿ ಸಲ್ಲಿಸುವ ವಿಧಾನ: PMEGP Scheme In Karnataka In Kannada 2026

  • ಅಧಿಕೃತ PMEGP ವೆಬ್ ಸೈಟ್ https://www.kviconline.gov.in/ ಗೆ ಭೇಟಿನೀಡಿ
  • ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ

ತೀರ್ಮಾನ:

ಭಾರತ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು:

ಪ್ರಮುಖ ಯೋಜನೆಗಳು ಪ್ರಮುಖ ಲಿಂಕುಗಳು
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಇಲ್ಲಿ ಕ್ಲಿಕ್ ಮಾಡಿ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಇಲ್ಲಿ ಕ್ಲಿಕ್ ಮಾಡಿ
ಐರಾವತ ಯೋಜನೆ ಅರ್ಜಿ 2026ಇಲ್ಲಿ ಕ್ಲಿಕ್ ಮಾಡಿ
ವಿಧವಾ ಪಿಂಚಣಿ ಯೋಜನೆ ಅರ್ಜಿ 2026ಇಲ್ಲಿ ಕ್ಲಿಕ್ ಮಾಡಿ
ಭಾಗ್ಯಲಕ್ಷ್ಮಿ ಯೋಜನೆ 2026 ಅರ್ಜಿ ಸಲ್ಲಿಸುವ ವಿಧಾನಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *