ಕರ್ನಾಟಕ ಸರ್ಕಾರವು ಸಾಕಷ್ಟು ಯೋಜನೆಯನ್ನು ಇಗಾಗಲೇ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (pmmvy) ಒಂದು. ಈ ಯೋಜನೆ ಮೂಕಲ ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರಿಗೆ ಮತ್ತು ತಾಯಂದರಿಗೆ ಸಿಗಲಿದೆ 6000 ಸಹಾಯಧನ.
Pregnancy Scheme In Karnataka Apply Online
ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆರ್ಥಿಕ ನೆರವು ನೀಡುವ ಸರ್ಕಾರದ ಉತ್ತಮ ಯೋಜನೆ ಇದಾಗಿದೆ. ಇಂತ ಅನೇಕ ಯೋಜನೆಗಳಿಂದ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಹೆರಿಗೆ ಸೌಲಭ್ಯ ಒದಗಿಸುವ ಪ್ರಮುಖ ಗುರಿ ಹೊಂದಿದೆ.
ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ ವೆಬ್ ಸೈಟ್ https://needsofkarnataka.in/ ಭೇಟಿನೀಡಿ. ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು,ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
ಯೋಜನೆಯ ಅವಲೋಕನ:(Pregnancy Scheme In Karnataka Apply Online)
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ(PMMVY) |
| ಅರ್ಹ ಫಲಾನುಭವಿಗಳು | ಗರ್ಭಿಣಿ ಮಹಿಳೆಯರಿಗೆ ಮತ್ತು ತಾಯಂದರಿಗೆ |
| ಒಟ್ಟು ಪ್ರೋತ್ಸಾಹಧನ | ರೂ. 6000/- |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ ಅರ್ಜಿ |
ಸಂಕ್ಷಿಪ್ತ ಮಾಹಿತಿ:
ನೀವಿಲ್ಲಿ ನೋಡಬಹುದು ಕರ್ನಾಟಕದಲ್ಲಿ ಈ ಯೋಜನೆಯು 2017ರಿಂದಲೇ ಜಾರಿಯಲ್ಲಿದ್ದು, ಅನೇಕ ಮಹಿಳೆಯರು ಈ ಒಂದು ಅಧ್ಬುತ ಯೋಜನೆಯ ಇದೇ ಯೋಜನೆ ಮೊದಲು ಇಂದಿರಾ ಗಾಂಧಿ ಮಾತೃತ್ವ ಸಹಯೋಗ್ ಯೋಜನೆ ಎಂದು ಕರೆಯಲಾಗುತ್ತಿತ್ತು.
ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಯೋಜನೆಯಲ್ಲಿ, ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಗರ್ಭಿಣಿ ಮತ್ತು ಮಕ್ಕಳಿರುವ ಮಹಿಳೆಯರಿಗೆ ಉಚಿತವಾಗಿ ₹5000/- ರೂಪಾಯಿಗಳ ನಗದು ಪ್ರಯೋಜನವನ್ನು ಕಂತುಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಿದ ಮಹಿಳೆಯ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ.
ಮುಂದಿನ ಹಂತ ಹಂತಗಳಲ್ಲಿ ಏನಿದು ಮಾತೃ ವಂದನಾ ಯೋಜನೆ ? ಈ ಯೋಜನೆಗೆ ಮಹಿಳೆಯರಿಗೆ ದೊರೆಯುವ ಸಹಾಯಧನ ಎಷ್ಟು ಹಾಗೆ ಅರ್ಜಿ ಸಲ್ಲಿಸೋದು ಹೇಗೆ ? ನೋಡ್ತಾ ಹೋಗೋಣ ಬನ್ನಿ…
ಏನಿದು ಮಾತೃ ವಂದನಾ ಯೋಜನೆ ? pregnancy scheme in karnataka apply online
2017ರ ಜನವರಿ 1ರಂದು ಸರ್ಕಾರವು ಪ್ರಾರಂಭಿಸಿದ ಹೆರಿಗೆ ಸೌಲಭ್ಯ ಯೋಜನೆ ಇದಾಗಿದ್ದು ಈ ಯೋಜನೆಯಡಿ 19 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗರ್ಭಿಣಿ ಮತ್ತು ಮಕ್ಕಳಿರುವ ತಾಯಂದಿರಿಗೆ ಮೊದಲ ಜನನಕ್ಕೆ ನೇರ ನಗದು ಪ್ರಯೋಜನವನ್ನು ಒದಗಿಸಲಾಗುತ್ತದೆ. ಕೆಲವೊಂದು ನಿಯಮಗಳು ಮತ್ತು ಷರತ್ತುಗಳು ಇದ್ದು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ₹6,000/- ರೂಪಾಯಿಗಳ ನಗದು ಪ್ರಯೋಜನವನ್ನು ಕಂತುಗಳಲ್ಲಿ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಯಾಗುತ್ತದೆ. ಎರಡನೇ ಮಗು ಹೆಣ್ಣಾಗಿದ್ದರೆ ತಾಯಂದಿರಿಗೆ ವಿಶೇಷವಾಗಿ ₹6,000 ಪ್ರೋತ್ಸಾಹಧನ ನೀಡುವ ಮೂಲಕ ಹೆಣ್ಣು ಭ್ರೂಣಹತ್ಯೆ ತಡೆಯಲು ಈ ಯೋಜನೆ ಪ್ರಯತ್ನಿಸಲಾಗುತ್ತಿದೆ.
ಒಂದೇ ಮಾತಿನಲ್ಲಿ ಹೇಳುವುದಾದರೆ, ಆರ್ಥಿಕವಾಗಿ ಹಿಂದುಳಿದ ತಾಯಂದಿರಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯಕ್ಕೆ ರಕ್ಷಣೆಗಾಗಿ ಸರ್ಕಾರ ನೀಡುವ ಮಹತ್ವದ ಆರ್ಥಿಕ ಬೆಂಬಲವೇ ಈ ಯೋಜನೆಯಾಗಿದೆ.
ಯೋಜನೆಯ ಉದ್ದೇಶ: Pregnancy Scheme In Karnataka Apply Online
ಕರ್ನಾಟಕ ಸರ್ಕಾರವು ಜಾರಿ ತಂದಿರುವ PMMVY ಯೋಜನೆಯು ಗರ್ಭಿಣಿಯರು ಹಾಗೆ ತಾಯಿ ಮಗುವಿನ ಆರೋಗ್ಯ ಹಾಗೂ ಪೌಷ್ಟಿಕಾಂಶದ ಮಟ್ಟವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಪ್ರಮುಖ ಉದ್ದೇಶಗಳು ಹೀಗಿವೆ
- ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಲ್ಲಿರುವ ಮಹಿಳೆಯರಿಗೆಕೆಲವು ಸಮಯ ಯಾವುದೇ ರೀತಿಯ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಹಾಗೆ ಉತ್ತಮ ಆಹಾರವನ್ನ ಸೇವಿಸಲು ಹಣಕಾಸಿನ ತೊಂದರೆ ಇರುತ್ತದೆ ಈ ಹಕಾರಣಕ್ಕಾಗಿನೇ ಆರ್ಥಿಕ ನೆರವ ಉದ್ದೇಶ ಹೊಂದಿದೆ.
- ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಗರ್ಭಧಾರಣೆಯ ಮುಂಚಿನ ಆಸ್ಪತ್ರೆ ತಪಾಸಣೆ ,ಆಸ್ಪತ್ರೆಯಲ್ಲಿ ಹೆರಿಗೆ (Institutional Delivery) ಹಾಗೆ ಮಗುವಿಗೆ ಸಕಾಲದಲ್ಲಿ ಲಸಿಕೆ ಹಾಕಿಸುವುದನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
- ತಾಯಿ ಮತ್ತು ಶಿಶು ಮರಣ ದರವನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
- ಈ ಯೋಜನೆ ಅಡಿಯಲ್ಲಿ ಎರಡನೇ ಮಗು ಕೂಡ ಹೆಣ್ಣದಲ್ಲಿ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?
- ಯೋಜನೆಯ ಫಲಾನುಭವಿಗಳ ಮನೆಯಲ್ಲಿ ಮೊದಲ ಮಗುವಾಗಿರುವ ಅಥವಾ ಗರ್ಭಿಣಿಯಾದ ಮಹಿಳೆಯರಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ ಹಾಗೆ ಎರಡನೇ ಮಗು ಹೆಣ್ಣಾದರೂ ಕೂಡ ಈ ಯೋಜನೆ ಸಂಪೂರ್ಣ ಲಾಭ ಪಡೆಯಬಹುದು.
- ಸರ್ಕಾರದ ಅಡಿಯಲ್ಲಿ ಮಹಿಳೆ ಇದೇ ರೀತಿಯ ಯೋಜನೆಯನ್ನ ಪಡೆಯುತ್ತಿರಬಾರದು ಹಾಗಿದ್ದಲ್ಲಿ ಗರ್ಭಿಣಿಯರು/ಹಾಲುಣಿಸುವ ಮಹಿಳೆಯರು ಮಾತೃ ವಂದನಾ ಯೋಜನೆಗೆ ಅರ್ಹರಾಗಿರುತ್ತಾರೆ.
- ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು PMMVY ಅಧಿಕೃತ ಪೋರ್ಟಲ್ ನಲ್ಲಿ ತಿಳಿಯಬಹುದು.
ಹಣದ ಕಂತುಗಳ ಸಂಪೂರ್ಣ ವಿವರ :- pregnancy scheme in karnataka apply online
ಗರ್ಭಿಣಿಯಾದ ಮಹಿಳೆಯ ಮೊದಲ ಮಗು ಜನನದ ಆಧಾರದಲ್ಲಿ ಮೇಲೆ ಪ್ರತಿ ಮಹಿಳೆಯರಿಗೆ ₹5000/- ಹಣ ಜಮಾ ಆಗುತ್ತದೆ.
ಮೊದಲ ಮಗುವಿಗೆ ಕಂತುಗಳ ಮಾಹಿತಿ:
- ಸಂಬಂಧ ಪಟ್ಟಲ್ಲಿ ಅರ್ಜಿ ಸಲ್ಲಿಸಿದ ನಂತರ ಒಂದು ಬಾರಿ ಪ್ರಸವಪೂರ್ವ ತಪಾಸಣೆ (ANC) ನಡೆಸಿದ ನಂತರ ಮೋಡ ಕಂತಿನ ₹3000/- ಹಣ ವರ್ಗಾವಣೆ ಆಗುತ್ತದೆ.
ಎರಡನೇ ಕಂತು :-
- ಮಗು ಜನನದ 14 ವಾರದೊಳಗೆ ಹಾಗೆ ಮೊದಲ ಸುತ್ತಿನ ಲಸಿಕೆಗಳು ಪೂರ್ಣಗೊಂಡ ನಂತರ ಹಣ ಜಮಾ ಆಗುತ್ತದೆ.
ಎರಡನೇ ಮಗು ಜನನ (ಹೆಣ್ಣು ಮಗು ಹುಟ್ಟಿದರೆ ಮಾತ್ರ) :-
- ಎರಡನೇ ಮಗು ಹೆಣ್ಣು ಮಗು ಹುಟ್ಟಿದರೆ ಮಾತ್ರ ₹6000/- ಹಣ ಜಮಾ ಮಹಿಳೆ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗುತ್ತದೆ.
- ಮಗುವಿನ ಜನನ ನೋಂದಣಿ ಮತ್ತು ಅರ್ಜಿ ಸಲ್ಲಿಸಿದ ತಾಯಿಗೆ ಹೆಣ್ಣು ಮಗು ಜನಿಸಿದೆ ಎಂದು ದಾಖಲೆಗಳು ಇದ್ದಲ್ಲಿ ಈ ಯೋಜನೆಯ ಲಾಭವನ್ನ ಪ್ರತಿ ತಾಯಂದಿರು ಪಡೆಯಬಹುದು.

ಯೋಜನೆಯ ಪ್ರಯೋಜನ ಏನಾಗಿರುತ್ತೆ ತಿಳಿಯೋಣ :
- ಕರ್ನಾಟಕದಲ್ಲಿನ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿರುವ ಮಹಿಳೆಯರಿಗೆ ಸರ್ಕಾರದ ಬಹು ದೊಡ್ಡ ಕೊಡುಗೆ ಅಂತಾನೆ ಹೇಳಬಹುದು.
- ಕೆಲವು ಮೆಡಿಸನ್ ಹಾಗೆ ಔಷದಿಗಳನ್ನ ಮೆಡಿಕಲ್ ನಲ್ಲಿ ಖರೀದಿ ಮಾಡಲು ಈ ಹಣ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊರೆಯಾಗುವುದಿಲ್ಲ.
- ಹೀಗೆ ಇನ್ನು ಅನೇಕ ಪ್ರಯೋಜನಗಳ ಈ ಯೋಜನೆಯ ಮುಕಾಂತರ ಮಹಿಳೆಯರಿಗೆ ದೊರಯುತ್ತದೆ.
ಯೋಜನೆಯ ಅನಾನುಕೂಲಗಳು: Pregnancy Scheme In Karnataka Apply Online
- ಈ ಯೋಜನೆಯು ಪ್ರಮುಖವಾಗಿ ಮೊದಲ ಮಗುವಿನ ಜನನಕ್ಕೆ ಮಾತ್ರ ಈ ಯೋಜನೆ ಲಾಭ ದೊರೆಯುತ್ತದೆ. ಎರಡನೇ ಮಗುವಿಗೆ ಲಾಭ ಸಿಗುವುದು ಆದರೆ ಅದು ಹೆಣ್ಣು ಮಗುವಾಗಿದ್ದಾಗ ಮಾತ್ರ, ಇದು ಅನೇಕ ಕುಟುಂಬಗಳನ್ನು ಯೋಜನೆಯಿಂದ ಹೊರ ಇಡುತ್ತದೆ.
- ಅರ್ಜಿ ಸಲ್ಲಿಸುವ ಮಹಿಳೆಯ ಕನಿಷ್ಠ 19 ವರ್ಷ ವಯಸ್ಸಿ ಹೊಂದಿರಬೇಕು. ಇದರಿಂದಾಗಿ 18 ವರ್ಷಕ್ಕೆ ಮದುವೆಯಾಗಿ ತಾಯಿಯಾಗುವ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನ ಪಡೆಯಲು ಅರ್ಹರಾಗಿರುವುದಿಲ್ಲ.
- ಈ ಯೋಜನೆ ಅಡಿಯಲ್ಲಿ ಮಹಿಳೆಯ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಮಗುವಿನ ಜನನ ಪ್ರಮಾಣಪತ್ರಗಳ ನಡುವೆ ಹೆಸರು ಅಥವಾ ಮಾಹಿತಿಯಲ್ಲಿ ಸಣ್ಣ ಪುಟ್ಟ ದೋಷಗಳು ಕಂಡು ಬಂದಲ್ಲಿ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸರಿಯಾಗಿ ಅರ್ಜಿಯನ್ನ ಗಮನಿಸಿ ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಸಿ.
- ಸರ್ಕಾರದ ಕೇವಲ 5 ರಿಂದ 6 ಸಾವಿರಕ್ಕೆ ಉತ್ತಮ ಆಹಾರ ಹಾಗೆ ಮಗುವಿನ ಆರೋಗ್ಯ ನೋಡಲು ಸಾಧ್ಯವಾಗುವುದಿಲ್ಲ.
ಅರ್ಹತಾ ಮಾನದಂಡ: pregnancy scheme in karnataka apply online
- ಕರ್ನಾಟಕದ ನಿವಾಸಿಗಳಾಗಿರಬೇಕು.
- ಕನಿಷ್ಠ 19 ವರ್ಷ ವಯಸ್ಸಿ ಹೊಂದಿರಬೇಕು.
- ಮಹಿಳೆಯ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಮಗುವಿನ ಜನನ ಪ್ರಮಾಣಪತ್ರಗಳು ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯ ರೂ. ₹8 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಮೊದಲ ಜೀವಂತ ಮಗುವಿಗೆ ಯೋಜನೆ ಲಾಭ ದೊರೆಯುತ್ತದೆ ಹಾಗೆ ಎರಡನೇ ಹೆಣ್ಣು ಮಗುವಿಗೆ ದೊರೆಯುತ್ತದೆ.
- BPL ಕಾರ್ಡ್ ಇರಬೇಕಾಗುತ್ತದೆ.
ಅಗತ್ಯ ದಾಖಲೆಗಳು:
- BPL ಪಡಿತರ ಚೀಟಿ
- ಆದಾಯ ಪ್ರಮಾಣಪತ್ರ
- MGNREGA ಜಾಬ್ ಕಾರ್ಡ್ ಅಥವಾ ಇ-ಶ್ರಮ್ (e-Shram) ಕಾರ್ಡ್.
- MGNREGA ಜಾಬ್ ಕಾರ್ಡ್ ಅಥವಾ ಇ-ಶ್ರಮ್ (e-Shram) ಕಾರ್ಡ್.
- ಆಧಾರ್ ಕಾರ್ಡ್
- ಮಗುವಿನ ಜನನ ಪ್ರಮಾಣಪತ್ರ
- ಲಸಿಕೆ ಕಾರ್ಡ್
- ಬ್ಯಾಂಕ್ ಪಾಸ್ಬುಕ್
ಅರ್ಜಿ ಸಲ್ಲಿಸುವ ವಿಧಾನ: Pregnancy Scheme In Karnataka Apply Online
ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಈ ಯೋಜನೆ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿರುವ ಮಹಿಳೆಯರು ವಾಸಿಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಅವಲಂಬಿಸಿ ಅನುಮೋದಿತ ಆರೋಗ್ಯ ಸೌಲಭ್ಯದಲ್ಲಿ ಅಥವಾ ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯರು ತಮ್ಮನ್ನ ತಾವು ನೋಂದಾಯಿಸಿಕೊಳ್ಳಬೇಕು.
- ಅರ್ಜಿ ಅಂಗನವಾಡಿ ಕೇಂದ್ರ ಇಲ್ಲವಾದಲ್ಲಿ ಆರೋಗ್ಯ ಸೌಲಭ್ಯದಲ್ಲಿ ಲಭ್ಯವಿದೆ. ನೀವು http://wcd.nic.in ಲಿಂಕ್ ಮೂಲಕ ಮಾತೃ ವಂದಾನಾ ಯೋಜನೆಗಾಗಿ ಅರ್ಜಿ ನಮೂನೆಯನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಬಹುದು.
- ಮಹಿಳೆ ಮತ್ತು ಆಕೆಯ ಪತಿಯ ಆಧಾರ್ ಕಾರ್ಡ್ ವಿವರಗಳನ್ನು ನೋಂದಣಿ ಸಂದರ್ಭದಲ್ಲಿ ಬ್ಯಾಂಕ್ ಅಕೌಂಟ್ ವಿವರವನ್ನ ನೀಡಿದಲ್ಲಿ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.
- ಪ್ರಮುಖವಾಗಿ ಕುಟುಂಬ ಸದಸ್ಯರ ಸಂಪರ್ಕ ಮಾಹಿತಿ, ಹಾಗೆ ಅರ್ಜಿ ಸಲ್ಲಿಸುವ ಮಹಿಳೆಯ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ವಿವರಗಳು, ಮಹಿಳೆ ಮತ್ತು ಅವರ ಗಂಡನ ಗುರುತಿನ ಪುರಾವೆ ಮತ್ತು ತಾಯಿ ಮತ್ತು ಮಕ್ಕಳ ರಕ್ಷಣಾ ಕಾರ್ಡ್ (MCP ಕಾರ್ಡ್) ನ ಪ್ರತಿಯನ್ನ ಕೇಳಲಾಗುತ್ತದೆ.
ತೀರ್ಮಾನ:-
ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಮತ್ತು ಹಾಲುಣಿಸುವ ಮಹಿಳೆಯಾರಿಗೆ ಪ್ರೋತ್ಸಾಹಧನ ಈ ಯೋಜನೆ ಮೂಲಕ ಸಿಗುತ್ತದೆ ಹಾಗೆ SC/ST ವರ್ಗಕ್ಕೆ ಸೇರಿದ ಮಹಿಳೆಯರು ಕೂಡ ಈ ಒಂದು ಯೋಜನೆಯ ಲಾಭ ಪಡೆದುಕೊಳ್ಳಬಹುದು. ಸಂಪರ್ಣವಾಗಿ ಓದಿಕೊಂಡ ಅಭ್ಯರ್ಥಿಗಳು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ವಿವಾಹವಾದ 18 ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

